ಬೈಬಲ್ · Indian Revised Version (Kannada) 2019
ಕೀರ್ತನೆಗಳು 133
1 ಆಹಾ, ಸಹೋದರರು ಒಂದಾಗಿರುವುದು, ಎಷ್ಟೋ ಒಳ್ಳೆಯದು, ಎಷ್ಟೋ ರಮ್ಯವಾದದ್ದು!
2 ಅದು ಆರೋನನ ತಲೆಯ ಮೇಲೆ ಹಾಕಲ್ಪಟ್ಟು, ಅವನ ಗಡ್ಡದ ಮೇಲೆಯೂ, ಅವನ ಅಂಗಿಗಳ ಕೊರಳ ಪಟ್ಟಿಯವರೆಗೂ ಹರಿದು ಬರುವ ಶ್ರೇಷ್ಠ ತೈಲದಂತೆಯೂ,
3 ಹೆರ್ಮೋನ್ ಪರ್ವತದಲ್ಲಿ ಹುಟ್ಟಿ, ಚೀಯೋನ್ ಪರ್ವತದ ಮೇಲೆ ಬೀಳುವ ಮಂಜಿನಂತೆಯೂ ಇದೆ. ಅಲ್ಲಿ ಆಶೀರ್ವಾದವೂ, ಜೀವವೂ ಸದಾಕಾಲ ಇರಬೇಕೆಂದು, ಯೆಹೋವನು ಆಜ್ಞಾಪಿಸಿದ್ದಾನೆ.
Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0