ಬೈಬಲ್ · Indian Revised Version (Kannada) 2019

ಕೀರ್ತನೆಗಳು 13

1 ಯೆಹೋವನೇ, ನೀನು ಇನ್ನೆಷ್ಟರವರೆಗೆ ನನ್ನನ್ನು ಸಂಪೂರ್ಣವಾಗಿ ಮರೆತಿರುವಿ? ಇನ್ನೆಲ್ಲಿಯ ತನಕ ನನಗೆ ವಿಮುಖನಾಗಿರುವಿ?

2 ನಾನು ಇನ್ನೆಷ್ಟರವರೆಗೆ ಹಗಲೆಲ್ಲಾ ದುಃಖಾಕ್ರಾಂತನಾಗಿದ್ದು, ಆಲೋಚಿಸಿಕೊಳ್ಳುತ್ತಾ ಇರಬೇಕು? ಇನ್ನೆಲ್ಲಿಯ ತನಕ ವಿರೋಧಿಯು ನನಗೆ ದೊರೆಯಾಗಿರಬೇಕು?

3 ಯೆಹೋವನೇ, ನನ್ನ ದೇವರೇ, ನನ್ನಲ್ಲಿ ದೃಷ್ಟಿಯಿಟ್ಟು ನನಗೆ ಸದುತ್ತರವನ್ನು ದಯಪಾಲಿಸು; ನನಗೆ ಮರಣನಿದ್ರೆಯು ಉಂಟಾಗದಂತೆ ನನ್ನ ಕಣ್ಣುಗಳನ್ನು ಕಳೆಗೊಳಿಸು.

4 ನನ್ನ ಶತ್ರುವು, “ನಾನು ಅವನನ್ನು ಜಯಿಸಿದೆನು” ಎಂದು ಹೇಳಿಕೊಳ್ಳಬಾರದು; ವೈರಿಗಳು, “ನನ್ನ ಎದುರಾಳಿಯು ಜಾರಿಬಿದ್ದನು” ಎಂದು ಹಿಗ್ಗಬಾರದು.

5 ನಾನಂತೂ ನಿನ್ನ ಕೃಪೆಯಲ್ಲಿ ಭರವಸವಿಟ್ಟಿದ್ದೇನೆ; ನೀನು ನನ್ನನ್ನು ರಕ್ಷಿಸಿದ್ದರಿಂದ ನನ್ನ ಹೃದಯವು ಹರ್ಷಗೊಳ್ಳುವುದು.

6 ಯೆಹೋವನ ಮಹೋಪಕಾರಕ್ಕಾಗಿ ಆತನಿಗೆ ಹಾಡುವೆನು.

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0