ಬೈಬಲ್ · Indian Revised Version (Kannada) 2019

ಕೀರ್ತನೆಗಳು 125

1 ಯೆಹೋವನಲ್ಲಿ ಭರವಸೆ ಇಡುವವರು, ಚೀಯೋನ್ ಪರ್ವತದ ಹಾಗೆ ಇದ್ದಾರೆ; ಅದು ಕದಲುವುದಿಲ್ಲ, ಸದಾ ಸ್ಥಿರವಾಗಿರುತ್ತದೆ.

2 ಪರ್ವತಗಳು ಯೆರೂಸಲೇಮಿನ ಸುತ್ತಲೂ ಹೇಗೋ ಹಾಗೆಯೇ, ಯೆಹೋವನು ಈಗಿನಿಂದ ಸದಾಕಾಲವೂ ತನ್ನ ಜನರ ಸುತ್ತಲೂ ಇರುವನು.

3 ದುಷ್ಟರ ದಂಡಾಧಿಕಾರವು ನೀತಿವಂತರ ಸ್ವತ್ತಿನಲ್ಲಿ ಉಳಿಯುವುದೇ ಇಲ್ಲ; ಉಳಿದರೆ ನೀತಿವಂತರೂ ಅಕ್ರಮಕ್ಕೆ ಕೈ ಹಾಕಬಹುದು.

4 ಯೆಹೋವನೇ, ಒಳ್ಳೆಯವರೂ, ಯಥಾರ್ಥಚಿತ್ತರೂ, ಆಗಿರುವವರಿಗೆ ಉಪಕಾರಮಾಡು.

5 ಯೆಹೋವನು ಡೊಂಕುದಾರಿ ಹಿಡಿದವರನ್ನು, ಪಾತಕಿಗಳು ಹೋಗುವ ಸ್ಥಳಕ್ಕೆ ನಡೆಸುವನು. ಇಸ್ರಾಯೇಲರಿಗೆ ಶುಭವುಂಟಾಗಲಿ.

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0