ಬೈಬಲ್ · Indian Revised Version (Kannada) 2019

ಕೀರ್ತನೆಗಳು 67

1 ದೇವರು ನಮ್ಮನ್ನು ಕಟಾಕ್ಷಿಸಿ ಆಶೀರ್ವದಿಸಲಿ; ಪ್ರಸನ್ನ ಮುಖದಿಂದ ನಮ್ಮನ್ನು ನೋಡಲಿ. ಸೆಲಾ

2 ಇದರಿಂದ ಭೂಲೋಕದಲ್ಲಿ ನಿನ್ನ ಪರಿಪಾಲನ ಮಾರ್ಗವೂ, ಎಲ್ಲಾ ಜನಾಂಗಗಳಲ್ಲಿ ನಿನ್ನ ರಕ್ಷಣೆಯೂ ಪ್ರಸಿದ್ಧವಾಗುವವು.

3 ದೇವರೇ, ಸರ್ವಜನಾಂಗಗಳು ನಿನ್ನನ್ನು ಕೀರ್ತಿಸಲಿ; ಸರ್ವಜನಾಂಗಗಳು ನಿನ್ನನ್ನು ಕೀರ್ತಿಸಲಿ.

4 ನೀನು ಸಮಸ್ತ ದೇಶಗಳವರನ್ನು ನೀತಿಯಿಂದ ಪಾಲಿಸಿ, ಭೂಪ್ರಜೆಗಳನ್ನೆಲ್ಲಾ ನಡೆಸುವಾತನಾಗಿರುವುದರಿಂದ ಜನಾಂಗಗಳು ಹರ್ಷಿಸಿ ಆನಂದಘೋಷ ಮಾಡಲಿ. ಸೆಲಾ

5 ದೇವರೇ, ಜನಾಂಗಗಳು ನಿನ್ನನ್ನು ಕೀರ್ತಿಸಲಿ; ಸರ್ವಜನಾಂಗಗಳು ನಿನ್ನನ್ನು ಕೀರ್ತಿಸಲಿ.

6 ಭೂಮಿಯು ಒಳ್ಳೆಯ ಬೆಳೆಯನ್ನು ಕೊಟ್ಟಿರುತ್ತದೆ. ದೇವರೇ, ನಮ್ಮ ದೇವರೇ ನಮ್ಮನ್ನು ಆಶೀರ್ವದಿಸಿದ್ದಾನೆ;

7 ಆತನು ನಮ್ಮನ್ನು ಆಶೀರ್ವದಿಸುವವನಾಗಿದ್ದಾನೆ. ಭೂಮಂಡಲದವರೆಲ್ಲರೂ ಆತನಲ್ಲಿ ಭಯಭಕ್ತಿಯುಳ್ಳವರಾಗಿರುವರು.

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0